ದೀಪಿಕಾ ಸಿಂಗ್ (ಜನನ: ೨೬ ಜುಲೈ ೧೯೮೯)ಇವರು ಭಾರತೀಯ ದೂರದರ್ಶನ ನಟಿ. ಇವರು ಸ್ಟಾರ್ ಪ್ಲಸ್ ಸರಣಿಯ ದಿಯಾ ಔರ್ ಬಾತಿ ಹಮ್ ನಲ್ಲಿ ಸಂಧ್ಯಾ ಪಾತ್ರವನ್ನು ವಹಿಸಿ ನಟಿಸಿದಕ್ಕೆ ಹೆಸರುವಾಸಿಯಾಗಿದ್ದಾರೆ. == ಆರಂಭಿಕ ಜೀವನ == ದೀಪಿಕಾ ಸಿಂಗ್ ಇವರು ೨೬ ಜುಲೈ ೧೯೮೯ ರಂದು ದೆಹಲಿಯ ರಜಪೂತ ಕುಟುಂಬದಲ್ಲಿ ಜನಿಸಿದರು. ಆಕೆಗೆ ಮೂವರು ಕಿರಿಯ ಸಹೋದರರು - ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರರಿದ್ದಾರೆ. ಇವರು ಪಂಜಾಬ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಾರ್ಕೆಟಿಂಗ್‌ನಲ್ಲಿ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. == ವೃತ್ತಿ == ದೀಪಿಕಾ ಇವರು ೨೦೧೧ ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಸಂಧ್ಯಾ ಕೊಥಾರಿ ಪಾತ್ರದಲ್ಲಿ, ದಿಯಾ ಔರ್ ಬಾತಿ ಹಮ್ ಧಾರವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದರು. ನಂತರ ಸೆಪ್ಟೆಂಬರ್ ೨೦೧೬ ರಲ್ಲಿ ಪ್ರದರ್ಶನವು ಪ್ರಸಾರವಾಗುವವರೆಗೂ ಅವರು ೫ ವರ್ಷಗಳ ಕಾಲ ಈ ಪಾತ್ರವನ್ನು ನಿರ್ವಹಿಸಿದರು. ೨೦೧೮ ರಲ್ಲಿ ಇವರು ದಿ ರಿಯಲ್ ಸೋಲ್ಮೇಟ್ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಅವರು ೨೦೧೪ ಮತ್ತು ೨೦೧೯ ರಲ್ಲಿ ಏಕ್ತಾ ಕಪೂರ್ ಅವರ ಬಾಕ್ಸ್ ಕ್ರಿಕೆಟ್ ಲೀಗ್‌ನಲ್ಲಿ ಸ್ಪರ್ಧಿಯಾದರು. ನಂತರ ೨೦೧೯ ರಲ್ಲಿ ಕಲರ್ಸ್ ಟಿವಿಯ ಅಲೌಕಿಕ ಕಾರ್ಯಕ್ರಮವಾದ ಕವಚ್ ಮಹಾಶಿವರಾತ್ರಿ ಎಂಬ ಧಾರವಾಹಿಯಲ್ಲಿ ಅವಳಿ ಸಹೋದರಿಯರಾದ ಸಂಧ್ಯಾ ಮತ್ತು ಸಾಕ್ಷಿ ಪಟ್ವರ್ಧನ್ ಅವರ ದ್ವಿಪಾತ್ರವನ್ನು ವಹಿಸಿ ನಟಿಸಿದ್ದಾರೆ. == ವೈಯಕ್ತಿಕ ಜೀವನ == ದೀಪಿಕಾರವರು ತನ್ನ ಟೆಲಿವಿಷನ್ ಕಾರ್ಯಕ್ರಮದ ನಿರ್ದೇಶಕ ರೋಹಿತ್ ರಾಜ್ ಗೋಯಲ್ ಅವರನ್ನು ೨ ಮೇ ೨೦೧೪ ರಂದು ವಿವಾಹವಾದರು. ಜನವರಿ ೨೦೧೭ ರಲ್ಲಿ, ಅವರು ತಮ್ಮ ಗರ್ಭಧಾರಣೆಯ ಸುದ್ದಿಗಳನ್ನು ಮಾಧ್ಯಮಗಳಿಗೆ ಮತ್ತು ಅವರ ಅಭಿಮಾನಿಗಳಿಗೆ ಘೋಷಿಸಿದರು. ಮೇ ೨೦೧೭ ರಲ್ಲಿ, ಅವರು ಗಂಡು ಮಗುವಿಗೆ ಜನ್ಮ ನೀಡಿದರು ಮತ್ತು ನಟನೆಯಿಂದ ಸ್ವಲ್ಪ ವಿರಾಮ ಪಡೆದರು. == ಟೆಲಿವಿಷನ್ == == ಪ್ರಶಸ್ತಿಗಳು == == ಉಲ್ಲೇಖಗಳು ==